ಹುಲಿ ಹಿಡಿದ ಕಡಸು........
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ರೂಪಾಂತರ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಯುವ ನಿರ್ದೇಶಕರಾದ ವಾದಿರಾಜ್ ,ನಂಜುಂಡೇಗೌಡ ,ಚೈತನ್ಯ ನಾಟಕ ನಿರ್ದೇಶಿಸಿದ್ದಾರೆ . ಗ್ರಾಮೀಣ ಹಿನ್ನಲೆಯ ನಂಜುಂಡೇಗೌಡ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತ ನಾಟಕದಲ್ಲಿ ಅಭಿನಯಿಸುವ ಆಸೆಯಿಂದ ಕಳೆದ ಆರು ವರ್ಷಗಳ ಹಿಂದೆ ರೂಪಾಂತರಕ್ಕೆ ಬಂದವರು . ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು . ಇದೀಗ ಮೊದಲಬಾರಿಗೆ ಡಾ .ಡಿ . ಕೆ ಚೌಟರ ತುಳು ನಾಟಕದ ಕನ್ನಡದ ಅನುವಾದ ಹುಲಿ ಹಿಡಿದ ಕಡಸು ನಿರ್ದೇಶಿಸಿದ್ದಾರೆ . ಈ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಗಳನ್ನು ಕಂಡಿದೆ .
ಮುಂಬೈ ಕರ್ನಾಟಕ ಸಂಘ ಆಯೋಜಿಸಿದ್ದ ಅಖಿಲ ಭಾರತ ಕುವೆಂಪು ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಸ್ಪರ್ಧಿಸಿ ಪ್ರಥಮ ಪಾರಿತೋಷಕ ಮತ್ತು ಅತ್ಯುತ್ತಮ ನಿರ್ದೇಶಕ ,ಅತ್ಯುತ್ತಮ ನಟ ,ನಟಿ ,ಫೋಷಕ ನಟ ,ನಟಿ ,ಅತ್ಯುತ್ತಮ ಸಂಗೀತ ,ಬೆಳಕು ,ವಸ್ತ್ರವಿನ್ಯಾಸ ಹೀಗೆ ಎಂಟು ಪ್ರಶಸ್ತಿ ಗಳನ್ನೂ ಪಡೆದಿರುವ ಈ ನಾಟಕ ದಿನಾಂಕ ೨೧-೮-೧೩ ರ ಬುಧವಾರ ಹುಣ್ಣಿಮೆ ರಾತ್ರಿಯಂದು ಸಂಜೆ ೭ ಗಂಟೆಗೆ ಕೋಲಾರದ ಶಿವ ಗಂಗೆಯ ತೇರಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ಬಯಲು ರಂಗ ಮಂದಿರದಲ್ಲಿ ಪ್ರದರ್ಶನ ವಾಗುತಿದೆ .





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ