23-07-13
ಮಂಗಳವಾರ ಆರು ವರ್ಷಗಳ ಹಿಂದೆ ಸುಡು ಬಿಸಲಿನಲ್ಲಿ ಶ್ರವಣಬೆಳಗೊಳದ ಬೆಟ್ಟದಮೇಲೆ ಕುಳಿತು ಗೊಮ್ಮಟನಿಗೆ ನಡೆಯುತಿದ್ದ ಮಹಾಮಸ್ತಕಾಭಿಷೇಕ ನೋಡುತಿದ್ದ ನನ್ನ ಮನಸಿನಲ್ಲಿ ಇಂದಿನ ರಾಜಕಾರಣಿಗಳು ,ಅಧಿಕಾರದಾಹ ,ಭ್ರಷ್ಟತೆ,ಕಣ್ಣ ಮುಂದೆ ಬಂತು . ಎಲ್ಲವೂ ತನ್ನ ಪಾದದ ಬಳಿ ಬಂದು ಬಿದ್ದಿದರೂ ಎಲ್ಲವನ್ನು ತಿರಸ್ಕರಿಸಿ ಕೇವಲಿಯಾಗಿ ಬೆತ್ತಲೆಯಾಗಿ ನಿಂತ ಬಾಹುಬಲಿಯನ್ನು ಕುರಿತ ನಾಟಕವನ್ನು ಮಾಡಬೇಕು ಎಂದು ಕಾಡತೊಡಗಿತು. ಗೆಳೆಯ ಬಸವರಾಜ ಸೂಳೇರಿಪಾಳ್ಯ ಈಕುರಿತು ನಾಟಕ ಬರೆಯಲು ಗಂಟು ಬಿದ್ದೆ . ಒಂದು ದಿನ ರವಿಂದ್ರ ಕಲಾಕ್ಷೇತ್ರದಲ್ಲಿ ಡಾ.ಕೆ. ವೈ . ನಾರಾಯಣಸ್ವಾಮಿ ಬಳಿ ಗೊಮ್ಮಟನ ಬಗ್ಗೆ ನಾಟಕ ಬರೆಯಲು ಚಿಂತನೆ ನಡೆದಿದೆ ಎಂದು ಬಚ್ಚಿ ತಿಳಿಸಿದರು . ಆಗ ಕೆ ವೈ ಎನ್ ನಾನು ಸಹ ಇದೇ ವಸ್ತುವುಳ್ಳ ಎಂಬ ನಾಟಕ ಬಗ್ಗೆ ಯೋಚಿಸುತಿದ್ದೇನೆ ಎಂದು ತಿಳಿಸಿದರು . ಹಾಗಾದರೆ ನೀವೇ ಚಂದ್ರು ಗೆ ನಾಟಕ ಬರೆದು ಕೊಡಿ ಎಂದು ತಮ್ಮ ಮೇಲಿದ್ದ ಹೊರೆಯನ್ನು ಕೆ ವೈಎನ್ ಹೆಗಲಿಗೆ ಹೊರೆಸಿದರು . ಅಂದಿನಿಂದ ನಾನು ಕೆ. ವೈ. ಎನ್
ಚಕ್ರ ರತ್ನ
ಗೆ ನಾಟಕ ಬರೆದು ಕೊಡಿ ಎಂದು ಕಾಡತೊಡಗಿದೆ . ಕಳೆದ ಡಿಸೆಂಬರ್ ನಲ್ಲಿ ೨೦೧೩ರ ಮೇ೨೦ ನನ್ನ ೫೦ರ ಹುಟ್ಟು ಹಬ್ಬ ಈ ಸಂದರ್ಭಕ್ಕಾದರು ನಾಟಕ ಬರೆದು ಕೊಡಿ ಎಂದು ಒತ್ತಾಯ ಮಾಡಿದೆ . ನನ್ನ ಹುಟ್ಟುಹಬ್ಬ ಸವಿ ನೆನಪಿಗಾಗಿ ಕೆ .ವೈ .ಎನ್ ಕೊನೆಗೂ ಚಕ್ರ ರತ್ನ ನಾಟಕ ಬರೆದು ಕೊಟ್ಟರು .
ರೂಪಾಂತರದ ೨೪ ವಸಂತಗಳ ಸಂಭ್ರಮ ಮತ್ತು ೫೦ರ ಹುಟ್ಟುಹಬ್ಬದ ಸಂದರ್ಭದಲ್ಲಿ ರೂಪಾಂತರದ ಗೆಳೆಯರು ದಿನಾಂಕ ೨೨-೦೫-೧೩ ರಂದು ತುಂಬಿದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ದಿಗ್ಗಜರ ಸಮ್ಮುಖದಲ್ಲಿ ಚಕ್ರ ರತ್ನ ನಾಟಕ ಪ್ರದರ್ಶನ ಕಂಡಿದ್ದು ನನ್ನ ರಂಗ ಪಯಣದಲ್ಲಿ ಪ್ರಮುಖ ಹೆಜ್ಜೆ .